ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತಿದ್ದ ಅಜ್ಜಿಯ ಗುಡಿಸಲಿಗೆ ಊಟಕ್ಕೆ ಹೋದ ಕಲೆಕ್ಟರ್, ಮಾಡಿರುವ ಕೆಲಸ ನೋಡಿ !!

19

ಸ್ನೇಹಿತರೆ, ಸಾಮಾನ್ಯವಾಗಿ ಒಂದು ಜಿಲ್ಲೆಯ ಕಲೆಕ್ಟರ್ ಅಥವಾ ಐಎಎಸ್ ಅಧಿಕಾರಿ ಎಂದರೆ ಅವರಿಗೆ ನೂರಾರು ಕೆಲಸಗಳು ಇರುತ್ತವೆ ಆದರೆ ಇಲ್ಲೊಬ್ಬ ಕಲೆಕ್ಟರ್ 80 ವರ್ಷದ ಅಜ್ಜಿಯ ಗುಡಿಸಲಿನ ಮನೆ ಮುಂದೆ ನಿಂತುಕೊಂಡು ಕಾಯುತ್ತಿದ್ದರು. ಅದಕ್ಕೆ ಕಾರಣ ಕೇಳಿದರೆ ನಿಜಕ್ಕೂ ನೀವು ಆಶ್ಚರ್ಯ ಪಡುತ್ತೀರಾ ಈಗಿನ ಕಾಲದಲ್ಲಿ ಕೂಡ ಇಂತಹ ಅಧಿಕಾರಿಗಳು ಇದ್ದಾರೆ ಎಂದು ಅನಿಸುತ್ತದೆ. ಅಸಲಿಗೆ ಆ ವ್ಯಕ್ತಿ ಯಾರು? ಈ ಘಟನೆ ನಡೆದಿರುವುದು ಎಲ್ಲಿ ಎಂಬುವುದನ್ನು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಈ ಘಟನೆ ನಡೆದಿರುವುದು ತಮಿಳುನಾಡಿನ ಕರೂರು ಜಿಲ್ಲೆಯಲ್ಲಿ ಅಲ್ಲಿನ ಐಎಎಸ್ ಅಧಿಕಾರಿ ನಾಗನ್ ಮಾಡಿರುವ ಕೆಲಸ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಲ್ಲಿನ 80 ವರ್ಷದ ವಯಸ್ಸಾದ ಮಹಿಳೆ ಒಂದು ಹೊತ್ತಿನ ಊಟಕ್ಕೆ ತುಂಬಾ ಕಷ್ಟ ಪಡುತ್ತಿದ್ದರು ಅವರಿಗೆ ಎದ್ದು ಕೂರಲು ಸಹ ಕಷ್ಟವಾಗುತ್ತಿತ್ತು. ಈ ಎಲ್ಲ ವಿಚಾರಗಳನ್ನು ಮನೆಯ ಹತ್ತಿರದಲ್ಲಿದ್ದ ಒಬ್ಬ ಹುಡುಗ ಪತ್ರದ ಮೂಲಕ ಬರೆದು ಕಂಟ್ರಾಕ್ಟರ್ ಗೆ ಪೋಸ್ಟ್ ಮಾಡಿದ್ದಾನೆ. ಈ ಪತ್ರ ಓದಿದ ಮರುದಿನವೇ ನಾಗಿನ್ ತನ್ನ ಹೆಂಡತಿಯ ಕೈಯಲ್ಲಿ ಅಡುಗೆ ಮಾಡಿಸಿಕೊಂಡು ಅಜ್ಜಿಯ ಮನೆಗೆ ಹೋಗುತ್ತಾರೆ ಮತ್ತು ಅವರ ಜೊತೆ ಕೂತು ದಯವಿಟ್ಟು ಊಟ ಮಾಡಿ ಎಂದು ಕೇಳಿಕೊಂಡು ಒಟ್ಟಿಗೆ ಊಟ ಮಾಡುತ್ತಾರೆ.

ಊಟ ಮುಗಿಸಿದ ಮೇಲೆ ಅಜ್ಜಿಗೆ ಪ್ರತಿ ತಿಂಗಳು ಪಿಂಚಣಿ ಬರುವ ಹಾಗೆ ಮಾಡಿಕೊಟ್ಟು ಮತ್ತು ಅವರಿಗೆ ಪತ್ರವನ್ನು ನೀಡಿ ಆರೋಗ್ಯದಿಂದಿರಿ ಇನ್ನು ಮುಂದೆ ನಿಮಗೆ ಪ್ರತಿತಿಂಗಳು ಸರ್ಕಾರದಿಂದ ಹಣ ಬರುತ್ತದೆ ಮತ್ತು ರೇಷನ್ ಕೂಡ ಬರುತ್ತದೆ. ನಿಮಗೆ ಏನೂ ತೊಂದರೆಯಾಗುವುದಿಲ್ಲ ಹೆದರಬೇಡಿ ಯಾವುದೇ ಸಮಸ್ಯೆ ಬಂದರೂ ನನಗೆ ಕರೆ ಮಾಡಿ ನಾನು ನೋಡಿಕೊಳ್ಳುತ್ತೇನೆ ಎಂದು ಧೈರ್ಯ ತುಂಬಿದ್ದಾರೆ. ಎಷ್ಟು ದೊಡ್ಡ ಸ್ಥಾನದಲ್ಲಿದ್ದರೂ ಸಹ ತಮ್ಮ ಕೆಲಸಗಳನ್ನು ಬಿಟ್ಟು ಸಾಮಾನ್ಯ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಇದೆ ಅಲ್ಲವೆ ನಿಜವಾದ ಸಮಾಜ ಸೇವೆ ಎಂದರೆ ಇನ್ನು ಇವರ ಕೆಲಸಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಶ್ಲಾಘಿಸಿದ್ದಾರೆ.