ಒಂದು ಕಾಲದಲ್ಲಿ ತಿನ್ನೋಕೆ ಊಟ ಇಲ್ಲದೆ ಮಲಗೋಕೆ ಜಾಗ ಇಲ್ಲದೆ ಚರಂಡಿಯಲ್ಲಿ ಮಲಗಿದ್ದ ಈತ ಇಂದು ದೊಡ್ಡ ನಟ !!
ಸ್ನೇಹಿತರೆ, ನಾವು ಏನಾದರೂ ಸಾಧನೆ ಮಾಡಬೇಕು ಅಂದುಕೊಂಡು ಗುರಿಯತ್ತ ತಲುಪಬೇಕು ಎನ್ನುವ ಛಲ ನಮ್ಮಲ್ಲಿದ್ದರೆ ಏನನ್ನಾದರೂ ಖಂಡಿತವಾಗಿಯೂ ಸಾಧನೆ ಮಾಡಬಹುದು ಅನ್ನುವುದಕ್ಕೆ ಸಾಕ್ಷಿ ಸತತವಾಗಿ ಏಳು ಹಿಟ್ ಚಿತ್ರಗಳನ್ನು ಕೊಟ್ಟು ತೆಲುಗು ಚಿತ್ರರಂಗವನ್ನೇ ನಡುಗಿಸಿದ ಸ್ಟಾರ್ ನಟ ರಾಜ್ ತರುಣ್. ವಿಶಾಖಪಟ್ಟಣಂ ನಿಂದ ಹೈದ್ರಾಬಾದ್ಗೆ ಹೀರೋ ಆಗಬೇಕು ಎಂದು ಉಪ ನಿರ್ದೇಶಕರ ಬಳಿ ಕೆಲಸ ಸಿಗುತ್ತದೆ ಇನ್ನು ಆ ನಿರ್ದೇಶಕರು ತನ್ನ ಹೊಸ ಸಿನಿಮಾದ ಆಡಿಷನ್ ಮಾಡುತ್ತಿರುತ್ತಾರೆ. ಹೀರೋಯಿನ್ ಅಡಿಷನಲ್ಲಿ ಭಾಗವಹಿಸುವ ನಟಿಯರ ಎದುರುಗಡೆ ರಾಜ್ ತರುಣ್ ಡೈಲಾಗ್ ಹೇಳುತ್ತಿರುತ್ತಾರೆ ಹೀಗೆ 200 ನಟಿಯರು ಅಡಿಶನ್ ಮಾಡಿದರು ಯಾರು ಕೂಡ ಸೆಲೆಕ್ಟ್ ಆಗುವುದಿಲ್ಲ. ಆಗ ಆ ಸಿನಿಮಾ ಕೈಬಿಟ್ಟು ನಿರ್ದೇಶಕರಾಗಿ ತರುಣ್ ಅವರನ್ನು ಕೆಲಸದಿಂದ ತೆಗೆದು ಹಾಕುತ್ತಾರೆ.
ನಿರ್ದೇಶಕ ಒಂದು ರೂಪಾಯಿ ಕೊಡದ ಕಾರಣ ಬಾಡಿಗೆ ರೂಮಿಗೆ ಹಣ ಕಟ್ಟಲು, ಊಟ ಮಾಡಲು ದುಡ್ಡಿಲ್ಲದೆ ರೂಮಿನ ಎದುರುಗಡೆ ಇದ್ದ ಒಂದು ಮೋರಿಯ ಮೇಲೆ 13 ದಿನಗಳ ಕಾಲ ಮಲಗುತ್ತಾರೆ ರಾಜ್ ತರುಣ್. ಮತ್ತೆ ಅದೇ ನಿರ್ದೇಶಕ ಸಿನಿಮಾ ಮಾಡಲು ನಿರ್ಧಾರ ಮಾಡಿ ರಾಜ್ ತರುಣ್ನನ್ನು ಕರೆದುಕೊಂಡು ಬರಲು ಒಬ್ಬ ವ್ಯಕ್ತಿಯನ್ನು ಕಳುಹಿಸುತ್ತಾರೆ. ಆತ ಬಂದು ನೋಡಿದರೆ ರೂಮಿನಲ್ಲಿ ರಾಜ್ ತರುಣ್ ಇರುವುದಿಲ್ಲ ವಾಪಸ್ ಹೋಗುವಾಗ ಅವರನ್ನು ಫುಟ್ಪಾತ್ ಮೇಲೆ ನೋಡುತ್ತಾರೆ ಕೊನೆಗೆ ರಾಜ್ ತರುಣ್ ನವರಿಗೆ ಸಿನಿಮಾದಲ್ಲಿ ನಟಿಸಲು ಅವಕಾಶ ಮಾಡಿಕೊಡುತ್ತಾರೆ ಆ ನಿರ್ದೇಶಕ.
ನಂತರ ಆಗಿದ್ದೆ ಬೇರೆ ಯಾರು ಉಳಿಸಿದ ರೀತಿಯಲ್ಲಿ ಆ ಸಿನಿಮಾ ಸೂಪರ್ ಹಿಟ್ ಆಗುತ್ತದೆ ಆ ಚಿತ್ರದ ಹೆಸರು ಉಯ್ಯಾಲ ಜಂಪಾಲ. ಇನ್ನು ಈ ಚಿತ್ರ ಕನ್ನಡದಲ್ಲಿ ಕೃಷ್ಣ-ರುಕ್ಕು ಆಗಿ ಕೂಡ ಡಬ್ ಆಗುತ್ತದೆ. ನಾವು ಮಾಡುವ ಕೆಲಸ ಯಾವುದೇ ಆಗಲಿ ಅದನ್ನು ನಿಷ್ಠೆಯಿಂದ ಮಾಡಬೇಕು ಅಷ್ಟೇ ಅದೃಷ್ಟ ಎನ್ನುವುದು ತನ್ನಷ್ಟಕ್ಕೆ ತಾನೇ ಹುಡುಕಿಕೊಂಡು ಬರುತ್ತದೆ ಎನ್ನುವುದಕ್ಕೆ ಈ ನಟ ಉತ್ತಮ ಉದಾಹರಣೆ ಎಂದು ಹೇಳಬಹುದು. ನಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕೆ ಸಿಗುತ್ತದೆ ಕಾಯುವ ಮನಸ್ಸಿರಬೇಕು ಅಷ್ಟೇ ಎಂಬುದನ್ನು ಈ ನಟ ಸಾಬೀತುಪಡಿಸಿದ್ದಾರೆ.