ಈ ಮಹಿಳೆ ಪ್ರತಿದಿನ ಮನೆ ಮುಂದೆ ಊಟ ಇಡುತಿದ್ದಳು ಅದನ್ನು ತಿಂದ ಮುದುಕ ಮಾಡಿದ ಕೆಲಕ್ಕೆ ನೀವು ಭೇಷ್ ಎನ್ನಲೇ ಬೇಕು !!
ನಮಸ್ಕಾರ ಗೆಳೆಯರೇ, ಕೆಲವೊಂದು ಬಾರಿ ಮನುಷ್ಯನ ಜೀವನದಲ್ಲಿ ನಡೆಯುವಂತಹ ಕೆಲವು ಘಟನೆಗಳನ್ನು ನಿಜವಾಗಿ ನಡೆದಿದೆಯೆಂದು ನಂಬಲು ಬಹಳ ಕಷ್ಟವಾಗುತ್ತದೆ ಆದರೆ ಆ ಘಟನೆಗಳು ನಿಜವಾಗಿಯೂ ನಡೆದಿರುತ್ತದೆ. ಈ ಮಾಹಿತಿಯಲ್ಲಿ ತಮಿಳುನಾಡಿನಲ್ಲಿ ವಾಸಮಾಡುತ್ತಿರುವ ವಿಂದ್ಯಾ ಎಂಬ ಮಹಿಳೆಯೊಬ್ಬರ ಜೀವನದಲ್ಲಿ ಇದೇ ರೀತಿ ನಂಬಲಾಗದಂತಹ ಒಂದು ನೈಜ ಘಟನೆ ನಡೆದಿದೆ ಹಾಗಾದರೆ ಈ ಘಟನೆ ಯಾವುದು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಇಂಡಿಯಾ ತನ್ನ ಪತಿ ಸುಂದರ ಮಗಳು ಶಾಮಿಲಿ ಮತ್ತು ಮಗ ಆರವ್ ಜೊತೆ ತಮಿಳುನಾಡಿನಲ್ಲಿ ಒಂದು ಪುಟ್ಟ ಹಳ್ಳಿಯಲ್ಲಿ ತುಂಬಾ ಖುಷಿಯಿಂದ ಜೀವನ ನಡೆಸುತ್ತಿದ್ದರು. ಆಕೆಯ ಮಗಳು ಈಗ ಪಿಯುಸಿ ಓದುತ್ತಿದ್ದಾಳೆ ಮತ್ತು ಮಗ ಆರವ್ ತನ್ನ ವಿದ್ಯಾಭ್ಯಾಸ ಮುಗಿಸಿ ಕೆಲಸ ಹುಡುಕಲು ಚೆನ್ನೈ ಸಿಟಿಯಲ್ಲಿ ಕೆಲವು ದಿನಗಳಿಂದ ಅಲೆದಾಡುತ್ತಿದ್ದ ಪ್ರತಿದಿನ ವಿಂದ್ಯಾಳ ಗಂಡ ಸುಂದರಿ ಕೆಲಸಕ್ಕೆ ಹೋದರೆ ಮಗಳು ಶಾಮಿಲಿ ಕಾಲೇಜಿಗೆ ಹೋಗುತ್ತಿದ್ದಳು. ವಿಂಧ್ಯ ತನ್ನೆಲ್ಲ ಮನೆ ಕೆಲಸಗಳನ್ನು ಮುಗಿಸಿ ಬೆಳಗ್ಗೆ ತಿಂಡಿ ತಿಂದು ಮನೆಯಲ್ಲಿ ವಿಶ್ರಾಂತಿ ಮಾಡುತ್ತಿದ್ದಳು. ತನ್ನ ಕುಟುಂಬವನ್ನು ಅತಿಯಾಗಿ ಪ್ರೀತಿಸುವಂತಹ ಅತ್ಯುತ್ತಮ ಸ್ತ್ರಿಆಗಿದ್ದಳು ಅಷ್ಟೇ ಅಲ್ಲದೆ ಒಳ್ಳೆಯ ಸ್ವಭಾವದ ಮಹಿಳೆಯಾಗಿದ್ದಳು.
ವಿಂದ್ಯಾ ಅವರಿಗೆ ಒಂದು ಅಭ್ಯಾಸ ಇತ್ತು ಅದೇನೆಂದರೆ ಪ್ರತಿದಿನ ವಿಂಧ್ಯ ತನ್ನ ಮನೆಯ ಮುಂದೆ ಒಂದು ತಟ್ಟೆಯಲ್ಲಿ ತನು ಮಾಡಿದಂತಹ ನಾಷ್ಟ ತಿಂಡಿಯನ್ನು ತಪ್ಪದೇ ಮನೆಯಿಂದ ಹೊರಗೆ ಪ್ರಾಣಿ-ಪಕ್ಷಿಗಳಿಗೆ ಎಂದು ತಿನ್ನಲು ಇಡುತ್ತಿದ್ದಳು. ಆದರೆ ವಿಂದ್ಯಾ ಮನೆ ಮುಂದೆ ಇಡುತ್ತಿದ್ದ ಊಟವನ್ನು ಪ್ರಾಣಿ ಪಕ್ಷಿಗಳು ತಿನ್ನದೇ ಒಬ್ಬ ವಯಸ್ಸಾದ ಇಂತಹ ಅಜ್ಜರೊಬ್ಬರು ಪ್ರತಿದಿನ ಅಲ್ಲಿಗೆ ಬಂದು ಊಟವನ್ನು ತಿನ್ನುತ್ತಿದ್ದರು. ಈ ರೀತಿ ಊಟವನ್ನು ತಿನ್ನಲು ಪ್ರತಿದಿನ ಅಲ್ಲಿಗೆ ತಪ್ಪದೇ ಬರುತ್ತಿದ್ದರು ತಾನು ಇಟ್ಟಿದಂತಹ ಊಟವನ್ನು ಅಜ್ಜನು ತಿನ್ನುತ್ತಿರುವುದನ್ನು ಗಮನಿಸಿದಂತಹ ವಿಂದ್ಯಾ ಅಜ್ಜನಿಗೆ ಹಸಿವಾಗಿದೆ ಅನಿಸುತ್ತದೆ ತಿನ್ನಲಿ ಬಿಡು ಎಂದು ಸುಮ್ಮನಾಗುತ್ತಿದ್ದಳು.
ಆದರೆ ಆ ವಯಸ್ಸಾದವರೂ ತಟ್ಟೆಯಲ್ಲಿದ್ದ ತಿಂಡಿಯನ್ನು ತಿಂದ ನಂತರ ಏನೋ ಜೋರಾಗಿ ಮಾತನಾಡಿ ಹೋಗುತ್ತಿದ್ದನ್ನು ದೂರದಲ್ಲಿ ನಿಂತು ತಾತನನ್ನೇ ನೋಡುತ್ತಿದ್ದ ವಿಂದ್ಯಾಗೆ ಆತ ಏನು ಮಾತನಾಡುತ್ತಿದ್ದಾನೆ ಎಂಬುವುದು ಕೇಳಿಸುತ್ತಿರಲಿಲ್ಲ. ಒಂದು ದಿನ ಆಕೆಗೆ ಕುತೂಹಲ ಉಂಟಾಗುತ್ತದೆ ಅಜ್ಜ ತಿಂಡಿ ತಿಂದ ನಂತರ ಏನು ಮಾತನಾಡುತ್ತನೆ ನೋಡೋಣ ಎಂದು ಅಜ್ಜನ ಬಳಿ ಹೋಗಿ ವಿಂದ್ಯ ನಿಂತುಕೊಂಡರೆ ಎಂದಿನಂತೆ ವಿಂದ್ಯಾ ಇಟ್ಟಿದ್ದನ್ನು ತಿಂದಾ ಅಜ್ಜ ಈ ರೀತಿ ವಿಂದ್ಯಾಳನ್ನು ನೋಡುತ್ತಾ ಹೇಳಿದ ನೀನು ಮಾಡಿದ ಪಾಪ ನಿನ್ನ ಹತ್ತಿರವೇ ಇರುತ್ತದೆ. ನೀನು ಮಾಡಿದ ಪುಣ್ಯ ನಿನ್ನ ಬಳಿಯೇ ಮತ್ತೆ ಬರುತ್ತದೆ ಎಂದು ಹೇಳಿದ ತಾತನ ವಿಚಿತ್ರ ಮಾತುಗಳನ್ನು ಕೇಳಿಸಿಕೊಂಡ ವಿಂದ್ಯಾಗೆ ಅಜ್ಜ ಯಾಕೆ ಹೀಗೆ ಹೇಳುತ್ತಿದ್ದಾನೆ ಎಂದು ಮನಸ್ಸಿನಲ್ಲೇ ಯೋಚಿಸಲು ಶುರುಮಾಡುತ್ತಾಳೆ.
ಇನ್ನು ಮರುದಿನ ಕೂಡ ಅದೇ ಜಾಗಕ್ಕೆ ಬಂದು ತಿಂಡಿಯನ್ನು ತಿಂದು ಪಾಪ-ಪುಣ್ಯದ ಬಗ್ಗೆ ಮಾತನಾಡುತ್ತಾನೆ ಪ್ರತಿದಿನ ಇದೇ ಮಾತನ್ನು ಹೇಳುತ್ತಾ ಇಡುತ್ತಿದ್ದ ತಿಂಡಿಯನ್ನು ತಿಂದು ಹೋಗುತ್ತಾನೆ. ಅಜ್ಜನ ಅವತಾರ ನೋಡಿ ಬಹಳ ಆಕ್ರೋಶಗೊಂಡ ವಿಂಧ್ಯ ಒಂದು ದಿನ ಈ ಮುದುಕನಿಗೆ ಏನಾದರೂ ಮಾಡಿ ಮುಗಿಸಿಬಿಡಬೇಕು ಎಂದು ತೀರ್ಮಾನ ಮಾಡುತ್ತಾರೆ. ಅದರಂತೆ ಬೆಳಗ್ಗೆ ಮಾಡಿದ ಇಡ್ಲಿಯಲ್ಲಿ ವಿಷವನ್ನು ಬೆರೆಸಲು ಮನೆ ಮುಂದೆ ಮುದುಕನ ತಿನ್ನಲು ಇಡಬೇಕು ಅನ್ನುವಷ್ಟರಲ್ಲಿ ಅವಳ ಮನಸ್ಸು ಬೇಡ ಎಂದು ಹೇಳುತ್ತದೆ ಈ ರೀತಿ ಪಾಪದ ಕೆಲಸವನ್ನು ಮಾಡಬಾರದು ಎಂದು ಅರಿವಾಗಿ ನಂತರ ಆಕೆಯ ಮನಸ್ಸನ್ನು ಬದಲಿಸಿಕೊಂಡು ಅಜ್ಜನಿಗೆ ವಯಸ್ಸಾಗಿದೆ ಬಾಯಿಗೆ ಬಂದಂಗೆ ಮಾತನಾಡುತ್ತಿರುತ್ತಾರೆ ಆತ ಮಾಡಿದ ತಪ್ಪಿಗೆ ನಾನೇಕೆ ತಾತನ ಜೀವ ತೆಗೆದು ಪಾಪ ಕಟ್ಟಿಕೊಳ್ಳಲು ಎಂದು ಮನಸ್ಸನ್ನು ಬದಲಿಸಿ ಬೇರೆ ತಟ್ಟೆಯಲ್ಲಿ ಅಜ್ಜನಿಗೆ ತಿನ್ನಲು ಇಡ್ಲಿಯನ್ನು ನೀಡುತ್ತಾಳೆ.
ಆಕೆಯ ಮಗ ಸಿಟಿಗೆ ತೆಗೆದುಕೊಂಡು ಹೋಗಿದ್ದ ಹಣವಿಲ್ಲ ಖಾಲಿಯಾಗಿದೆ ಕೆಲಸ ಸಿಗುವುದಿಲ್ಲ ಎಂದು ಗೊತ್ತಾಗಿ ಊರಿಗೆ ಬರಲು ಬಸ್ ಟಿಕೆಟ್ಗೂ ಹಣ ಇಲ್ಲದ ಕಾರಣ ನಡೆದುಕೊಂಡು ಊರಿಗೆ ಬಂದಾತ ಸುಸ್ತಾಗಿದ್ದ ಕಾರಣ ತಲೆತಿರುಗಿ ಕೆಳಗೆ ಬಿದ್ದು ಬಿಟ್ಟ ಆಗ ಆ ಮುದುಕ ಒಂದು ಮರದ ಕೆಳಗೆ ಮಲಗಿಸಿ ಕುಡಿಯಲು ನೀರು ಕೊಟ್ಟು ಪ್ರಜ್ಞೆ ತಪ್ಪಿದವರನ್ನು ಎಚ್ಚರಿಸಿದ ಎಂದು ಆರವ್ ತನ್ನ ತಾಯಿಗೆ ಹೇಳಿದ. ಇದನ್ನು ಕೇಳಿದ ವಿಂದ್ಯಾಳಿಗೆ ಆಶ್ಚರ್ಯವಾಯಿತು ಬಾಗಿದ ಅಜ್ಜ ಎಂದರೇ ನಾನು ಪ್ರತಿದಿನ ಊಟ ಇಡುತ್ತಿದ್ದ ಅಜ್ಜನೇ ಇರಬೇಕು. ನಾವು ಮಾಡಿದ ಪುಣ್ಯದ ಕೆಲಸ ನಮ್ಮನ್ನು ಒಂದಲ್ಲ ಒಂದು ಸಮಯದಲ್ಲಿ ಕಾಪಾಡುತ್ತದೆ ಎಂದು ಆಕೆಗೆ ತಿಳಿಯಿತು…