ಮೊದಲು ಆಯ್ಕೆಯಾಗಿದ್ದು ರಾಬರ್ಟ್ ಗೆ ರಾಶಿ ಖನ್ನಾ, ಆದರೆ ಆಶಾ ಭಟ್ ಸೆಲೆಕ್ಟ್ ಆಗಿದ್ದು ಯಾಕೆ ನೋಡಿ !!

13

ನಮಸ್ಕಾರ ಸ್ನೇಹಿತರೆ, ಡಿ ಬಾಸ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ರಿಲೀಸ್ ಆಗಿ ಸೂಪರ್ ಸಕ್ಸಸ್ ಅನ್ನು ಕಂಡಿದೆ. ನಿರೀಕ್ಷೆಗೂ ಮೀರಿ ಯಶಸ್ಸನ್ನು ಗಳಿಸಿರುವ ಸಂತಸದಲ್ಲಿ ಹಿಡಿ ಸಿನಿಮಾ ತಂಡವಿದೆ. ಬಾಕ್ಸಾಫೀಸ್ ನಲ್ಲಿ ಕೋಟಿಕೋಟಿ ಹಣ ಗಳಿಕೆ ಮಾಡಿರುವ ರಾಬರ್ಟ್ ಸ್ಯಾಂಡಲ್ವುಡ್ನಲ್ಲಿ ದಾಖಲೆ ನಿರ್ಮಿಸಿದೆ. ಕರೋನಾ ಬಳಿಕ ಸಿಕ್ಕ ಬಹುದೊಡ್ಡ ಗೆಲುವು ಇದಾಗಿದ್ದು, ಅಭಿಮಾನಿಗಳು ಸಹ ರಾಬರ್ಟ್ ಸಿನಿಮಾವನ್ನು ನೋಡಿ ಹುಚ್ಚೆದ್ದು ಕುಣಿಯುವಂತೆ ಆನಂದಿಸುತ್ತಿದ್ದಾರೆ.

ಮಾರ್ಚ್ 11 ರಂದು ತೆರೆಗೆ ಬಂದ ರಾಬರ್ಟ್ ಇಂದಿಗೂ ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಯಶಸ್ಸಿನ ಜೊತೆಗೆ ಚಿತ್ರದ ಬಗ್ಗೆ ಒಂದಿಷ್ಟು ಕುತೂಹಲಕಾರಿ ಸಂಗತಿಗಳು ಸಹ ಒಂದೊಂದಾಗಿ ಬಹಿರಂಗವಾಗುತ್ತಿದೆ. ಇತ್ತೀಚಿಗೆ ಯುಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ನಿರ್ಮಾಪಕ ಉಮಾಪತಿ ಚಿತ್ರದ ನಾಯಕಿ ಆಯ್ಕೆಯ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ರಾಬರ್ಟ್ ಸಿನಿಮಾಗೆ ಮೊದಲು ಆಯ್ಕೆಯಾಗಿದ್ದು ತೆಲುಗು ಮತ್ತು ತಮಿಳು ಸಿನಿಮಾ ರಂಗದಲ್ಲಿ ಮಿಂಚುತ್ತಿರುವ ನಟಿ ರಾಶಿ ಖನ್ನ ಎನ್ನುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ದರ್ಶನ್ ಅವರ ಜೊತೆ ನಾಯಕಿಯಾಗಿ ಆಶಾ ಭಟ್ ಜಾಗದಲ್ಲಿ ರಾಶಿ ಖನ್ನ ಇರುತ್ತಿದ್ದರು. ಆದರೆ ಹಾಗಾಗಲಿಲ್ಲ, ರಾಶಿ ಬದಲಿಗೆ ಕನ್ನಡ ಆಶಾ ಭಟ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಮಿಂಚಿದ್ದಾರೆ. ಅಂದಹಾಗೆ ಆಶಾ ಭಟ್ ಅವರನ್ನು ಆಯ್ಕೆ ಮಾಡಿದ್ದು, ಮತ್ತ್ಯಾರು ಅಲ್ಲ ಡಿ ಬಾಸ್ ದರ್ಶನ್. ಕನ್ನಡದ ನಾಯಕಿಯೇ ಇರಲಿ ಎಂದು ದರ್ಶನ್ ಅವರೆ ಹೇಳಿ, ಆಶಾ ಭಟ್ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ನಿರ್ಮಾಪಕ ಉಮಾಪತಿ ಅವರು ವಿವರಿಸಿದ್ದಾರೆ.

ರಾಬರ್ಟ್ ಗಾಗಿ ದರ್ಶನ್ ಆಯ್ಕೆ ಮಾಡಿದ್ದು, ನಾಯಕಿ ಆಶಾ ಭಟ್  ಒಬ್ಬರನ್ನೇ ಅಲ್ಲ, ದರ್ಶನ್ ಸ್ನೇಹಿತನಾಗಿ ಕಾಣಿಸಿಕೊಂಡಿರುವ ವಿನೋದ್ ಪ್ರಭಾಕರ್ ಅವರನ್ನು ಆಯ್ಕೆ ಮಾಡಿದ್ದು ಸಹ ದರ್ಶನ್ ಅವರೇ, ವಿನೋದ್ ಪ್ರಭಾಕರ್ ಅವರ ಜಾಗಕ್ಕೆ ಮೊದಲು ಬೇರೆ ಭಾಷೆಯ ಸ್ಟಾರ್ ಕಲಾವಿದನನ್ನು ಆಯ್ಕೆಮಾಡಲಾಗಿತ್ತು ಅಂತೆ, ಆದರೆ ಕನ್ನಡದ ನಟ ವಿನೋದ್ ಇರಲಿ ಎಂದು ಹೇಳಿ ರಾಘವನ ಪಾತ್ರ ಆಯ್ಕೆ ಮಾಡಿದ್ದು ಸಹ ದರ್ಶನ್. ಇನ್ನು ಚಿತ್ರದ ಮತ್ತೊಂದು ಪ್ರಮುಖ ಪಾತ್ರ ರವಿಶಂಕರ್ ಅವರನ್ನು ಸಹ ಆಯ್ಕೆ ಮಾಡಿದ್ದು ದರ್ಶನ್ ಅವರೇ ಎಂದು ಉಮಾಪತಿ ಹೇಳಿದ್ದಾರೆ. ಚಿತ್ರದಲ್ಲಿ ಆದಷ್ಟು ಕನ್ನಡದ ಕಲಾವಿದರೆ ಇರಬೇಕೆಂದು ಸಿನಿಮಾ ಪ್ರಾರಂಭದಲ್ಲಿ ದರ್ಶನ್ ಅವರು ಹೇಳಿದ್ದಾರಂತೆ. ಅದರಂತೆಯೆ ರಾಬರ್ಟ್ ಸಿನಿಮಾದಲ್ಲಿ ಬಹುತೇಕರು ಕನ್ನಡಿಗರೇ ಇದ್ದಾರೆ ಎಂದು ಉಮಾಪತಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ…….