ಇವರನ್ನು ನೋಡಿದರೆ ಕೈ ಮುಗಿಯಬೇಕು ಬರೋಬ್ಬರಿ 500 ಕ್ಕೂ ಹೆಚ್ಚು ಶೌಚಾಲಯಗಳನ್ನು ಕಟ್ಟಿಸಿ ಕೊಟ್ಟಿದ್ದಾರೆ ಬುಡಕಟ್ಟು ಜನರಿಗೆ ಹೇಗೆ ನೋಡಿ !!
ನಮಸ್ಕಾರ ಪ್ರಿಯ ಓದುಗರೇ, ನಿಮಗೆ ತಿಳಿದಿರಬಹುದು ಸ್ನೇಹಿತರೆ ಕೋಟಿ ಕೋಟಿ ಸಂಪಾದನೆ ಮಾಡಿಕೊಂಡು ಮನೆಯಲ್ಲಿ ಇಟ್ಟುಕೊಂಡು, ಮತ್ತಷ್ಟು ಬೇಕು ಎನ್ನುವ ಆಸೆ ನಮ್ಮ ಜನರದ್ದು, ನಮಗೆಲ್ಲ ಸಾಮಾನ್ಯವಾಗಿ ಗೊತ್ತಿರುವ ಹಾಗೆ ರಾಜಕಾರಣಿಗಳು ದೊಡ್ಡದೊಡ್ಡ ಉದ್ಯಮಿಗಳು ಸಾವಿರಾರು ಕೋಟಿ ಆಸ್ತಿಯ ಒಡೆಯರಾಗಿದ್ದರು, ಬಡವರಿಗೆ ಒಂದು ರೂಪಾಯಿ ಕೂಡ ಸಹಾಯ ಮಾಡುವುದಿಲ್ಲ, ಅಂತದ್ದರಲ್ಲಿ ನಮ್ಮಂತೆ ಸಾಮಾನ್ಯ ಜನರಂತೆ ಹುಟ್ಟಿ ಬೆಳೆದು ಸಾಕಷ್ಟು ಜನಗಳಿಗೆ ಸಹಾಯ ಮಾಡುತ್ತಿರುವ ಒಬ್ಬ ವ್ಯಕ್ತಿಯ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ, ಇದನ್ನು ಸಂಪೂರ್ಣವಾಗಿ ಓದಿ ಮತ್ತು ಈ ಲೇಖನವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಮುಖಾಂತರ ಅವರಿಗೆ ಪ್ರಶಂಸೆಯನ್ನು ಕೊಡಿ.
ಹೌದು ಸ್ನೇಹಿತರೆ ನಮ್ಮಂತೆ ಬಡಜನರ ವರ್ಗದಲ್ಲಿ ಹುಟ್ಟಿ ಬೆಳೆದು ಬಂದ ವ್ಯಕ್ತಿಯೇ ಪಿಜಿ ಸುಧಾ ಇವರು ಸರಿ ಸುಮಾರು 16 ವರ್ಷಗಳಿಂದ ಫಾರೆಸ್ಟ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದಾರೆ, ಇವರು ಮಾಡಿರುವ ಉತ್ತಮವಾದ ಕೆಲಸವೆಂದರೆ ಇವರು ಬುಡಕಟ್ಟು ಪ್ರದೇಶದಲ್ಲಿ ಬದುಕುತ್ತಿರುವ ಬಡಜನರಿಗೆ, ಉಚಿತವಾಗಿ ಶೌಚಾಲಯಗಳನ್ನು ಕಟ್ಟಿಸಿ ಕೊಟ್ಟಿದ್ದಾರೆ, ಎಲ್ಲೆಡೆ ಸೂಚಿ ಕಾಪಾಡಬೇಕು ಎಂದು ಕಳಕಳಿ ಹೊಂದಿರುವ ಪಿಜಿ ಸುಧಾ ಅವರು, ಒಂಬತ್ತು ಬುಡಕಟ್ಟು ಪ್ರದೇಶಗಳಲ್ಲಿ ಬರೋಬ್ಬರಿ ಮೂರು ತಿಂಗಳಿನಲ್ಲಿ ಐನೂರಕ್ಕೂ ಹೆಚ್ಚು ಶೌಚಾಲಯಗಳನ್ನು ಕಟ್ಟಿಸಿ ಕೊಟ್ಟಿದ್ದಾರೆ, ಈ ಕಾರ್ಯಕ್ಕೆ ಅವರಿಗೆ ಕೇರಳ ಸರ್ಕಾರದಿಂದ ಉತ್ತಮ ಅರಣ್ಯ ರಕ್ಷಕ ಎಂಬ ಪ್ರಶಸ್ತಿಯನ್ನು ಕೊಟ್ಟು ಸನ್ಮಾನಿಸಲಾಗಿದೆ.
ನಿಮಗೆಲ್ಲ ತಿಳಿದಿರುವ ಹಾಗೆ ಸ್ನೇಹಿತರೆ ಬುಡಕಟ್ಟು ಜನಗಳಿಗೆ ಸಾಕಷ್ಟು ಸಾಮಾಜಿಕ ಜ್ಞಾನ ಇರುವುದಿಲ್ಲ ಹಾಗಾಗಿ ಅವರು ಎಲ್ಲೆಂದರಲ್ಲಿ ಮಲ ಮತ್ತು ಮೂತ್ರವನ್ನು ಮಾಡಿಬಿಡುತ್ತಾರೆ, ಹೀಗಾಗಿ ಸ್ವಚ್ಛತೆ ಉಳಿಯುವುದಿಲ್ಲ, ಇದನ್ನು ತಡೆಗಟ್ಟಲೆಂದು ಬುಡಕಟ್ಟು ಪ್ರದೇಶಗಳಲ್ಲಿ ಶೌಚಾಲಯಗಳನ್ನು ಕಟ್ಟಿಸಬೇಕು ಎಂದು ಕಂಟ್ರಾಕ್ಟರಿಗೆ ಈ ಕೆಲಸವನ್ನು ನಿರ್ವಹಿಸುತ್ತಾರೆ, ಎರ್ನಾಕುಲಂ ಡಿಸಿ ಮೊಹಮ್ಮದ್ ವೈ ಶಫಿರುಲ್ ಅವರು ಈ ಕಾರ್ಯವನ್ನು ಕಾಂಟ್ಯಾಕ್ಟ ರಿಗೆ ಒಪ್ಪಿಸಿದಾಗ ಆತ ಖರ್ಚಿಗಿಂತ ಹೆಚ್ಚಾಗಿ ಮೂರು ಪಟ್ಟು ಹಣವನ್ನು ಕೇಳುತ್ತಾನೆ ಮತ್ತು ಬುಡಕಟ್ಟು ಜನಾಂಗಗಳನ್ನು ಕೆಲಸಕ್ಕೆ ಇಟ್ಟುಕೊಳ್ಳುತ್ತೇನೆ ಎಂದು ಹೇಳುತ್ತಾನೆ, ಕೊನೆಗೆ ಈ ಕೆಲಸವನ್ನು ನನ್ನ ಕೈಯಿಂದ ಮಾಡಲು ಸಾಧ್ಯವಿಲ್ಲ ಎಂದು ಕೆಲಸವನ್ನು ಮಧ್ಯದಲ್ಲಿ ಬಿಟ್ಟು ಹೋಗಿ ಬಿಡುತ್ತಾನೆ.
ಆಗ 50 ವರ್ಷದ ಪಿಜಿ ಸುಧಾ ಅವರು ಒಬ್ಬ ಸೈನಿಕನಂತೆ ಮುಂದೆ ನಿಂತು ತಾವೆ ಸ್ವತಃ ಕಾರ್ಯಗಳನ್ನು ನೆರವೇರಿಸುತ್ತಾರೆ, ಅವರೇ ಎಲ್ಲಾ ಕೆಲಸ ಕಾರ್ಯಗಳನ್ನು ತಮ್ಮ ಮೈಮೇಲೆ ಎಳೆದುಕೊಂಡು ಮಾಡಿ ಮುಗಿಸುತ್ತಾರೆ, ಅದು ಸರ್ಕಾರ ಕೊಟ್ಟ ಹಣದಲ್ಲಿ ಸಾಕಷ್ಟು ಹಣವನ್ನು ಉಳಿಸುದ್ದಲ್ಲದೆ, ಕಡಿಮೆ ಖರ್ಚಿನಲ್ಲಿ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿ ಬುಡಕಟ್ಟು ಜನಾಂಗದ ಜನಗಳಿಗೆ ಸ್ವಲ್ಪ ಕೆಲಸವನ್ನು ಕೂಡ ಕೊಟ್ಟು ಬರೋಬ್ಬರಿ ಮೂರು ತಿಂಗಳಿನಲ್ಲಿ ಕೆಲಸ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿಬಿಡುತ್ತಾರೆ ಪಿಜಿ ಸುಧಾ ಅವರು, ಹೌದು ಇವರು ಬರೋಬ್ಬರಿ ಮೂರು ತಿಂಗಳಿನಲ್ಲಿ ಐನೂರಕ್ಕೂ ಹೆಚ್ಚು ಶೌಚಾಲಯಗಳನ್ನು 9 ಬುಡಕಟ್ಟು ಪ್ರದೇಶಗಳಲ್ಲಿ ನಿರ್ಮಿಸಿದ್ದಾರೆ ಇದಕ್ಕೆ ಸರ್ಕಾರ ಮೆಚ್ಚಿ ಇವರಿಗೆ ಅರಣ್ಯ ರಕ್ಷಕ ಪ್ರಶಸ್ತಿಯನ್ನು ಕೊಟ್ಟಿದ್ದಾರೆ, ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮುಖಾಂತರ ತಿಳಿಸಿ…