ಆಟೋ ಓಡಿಸಿದ ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ್ ಎಲ್ಲಾ ಕಡೆ ಸಿಕ್ಕಾಪಟ್ಟೆ ವೈರಲ್ ಆಯ್ತು ವಿಡಿಯೋ, ನೀವು ನೋಡಿ !!
ಚಂದನವನದಲ್ಲಿ ಬ್ಯುಸಿಯಾಗಿರುವ ನಟಿಮಣಿಯರ ಲಿ ಅದಿತಿ ಪ್ರಭುದೇವ್ ಕೂಡ ಒಬ್ಬರು. ‘ಗುಂಡ್ಯಾನ ಹೆಂಡತಿ’ ಎನ್ನುವ ಕಿರುತೆರೆ ಸೀರಿಯಲ್ ನಲ್ಲಿ ಕಾಣಿಸಿಕೊಂಡ ಇವರ ಹಸಿರು ಪಯಣ ಶುರುವಾಗಿದ್ದು ಅಜಯ್ ರಾವ್ಅವರ ಧೈರ್ಯಂ ಚಿತ್ರ ಮೂಲಕ. ನಾಗಕನ್ನಿಕೆ ಶಿವಾನಿ ಪಾತ್ರದ ಮೂಲಕ ಕಿರುತೆರೆ ಲೋಕದಲ್ಲಿ ಸಕ್ಕತ್ ಮಿಂಚಿದ್ದರು. ದಾವಣಗೆರೆಯಲ್ಲಿ ಜನಿಸಿದ ಇವರು ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್ಮೆಂಟ್ ನಲ್ಲಿ ಮಾಸ್ಟರ್ ಡಿಗ್ರಿ ಪಡೆದುಕೊಂಡಿದ್ದಾರೆ. ಸೀರಿಯಲ್ ನಟಿಸುತ್ತಿದ್ದ ಕಾರಣ 20 ಸಿನಿಮಾಗಳ ಅಡಿಷನಲ್ಲಿ ರಿಜೆಕ್ಟ್ ಆಗಿದ್ದ ನಟಿ ಈಗ ಅನೇಕ ಸಿನಿಮಾಗಳಿಗೆ ಸಹಿ ಮಾಡಿದ್ದಾರೆ.
ಬಜಾರ್ ಸಿನಿಮಾ ಇವರ ಬದುಕಿಗೆ ಬ್ರೇಕ್ ಕೊಟ್ಟ ಸಿನಿಮಾ ಅಂತನೇ ಹೇಳಬಹುದು. ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿರುವ ಅಧಿತಿ ಪ್ರಭುದೇವ್ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಹೌದು ಸಾಲು ಸಾಲು ಚಿತ್ರಗಳು ಇವರ ಕೈಯಲ್ಲಿ ಇದ್ದು, ಶೂಟಿಂಗ್ನಲ್ಲಿ ಬ್ಯುಸಯಾಗಿದ್ದಾರೆ ಅದಿತಿ ಸಿನಿಮಾ ಚಿತ್ರ ಚಿತ್ರೀಕರಣದ ನಡುವೆ ಆಟೋ ಓಡಿಸುವ ಮೂಲಕ ಅಭಿಮಾನಿ ಬಳಗಕ್ಕೆ ಶಾಕ್ ನೀಡಿದ್ದಾರೆ. ಹೌದು ಈಗ ಅದಿತಿ ಪ್ರಭುದೇವ್ ಆಟೋ ಓಡಿಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ನಟಿಯರು ಟ್ರ್ಯಾಕ್ಟರ್ ಓಡಿಸುವುದು, ಅಥವಾ ಕಾರ್ ಓಡಿಸುವುದನ್ನು ನೋಡಿದ್ದೇವೆ, ಆದರೆ ಕನ್ನಡದ ನಟಿ ಅದಿತಿ ಪ್ರಭುದೇವ ಆಟೋ ಓಡಿಸುವ ಮೂಲಕ ಸುದ್ದಿಯಾಗಿದ್ದಾರೆ. ಡಿ ಬಾಸ್ ದರ್ಶನ್ ಅಭಿನಯಿಸಿದ ಸಾರಥಿ ಕನ್ನಡ ಹಾಡನ್ನು ಹಾಕಲಾಗಿದೆ. ಈ ವಿಡಿಯೋಗೆ ಅಭಿಮಾನಿಗಳಿಂದ ಮೆಚ್ಚುಗೆ ಕೂಡಿದ ಪ್ರತಿಕ್ರಿಯೆಗಳು ಹರಿದುಬರುತ್ತಿದೆ. ಸೌಂದರ್ಯದ ಮೂಲಕ ಅಭಿಮಾನಿಗಳಿಗೆ ಇಷ್ಟ ವಾಗುತ್ತಿರುವ ಅಧಿತಿ ಪ್ರಭುದೇವ್ ಇದೀಗ ಆಟೋ ಓಡಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅದಿತಿಯ ಕೈಯಲ್ಲಿ ಸದ್ಯಕ್ಕೆ 10ಕ್ಕೂ ಹೆಚ್ಚು ಚಿತ್ರಗಳಿದ್ದು, ಕೊನೆಯದಾಗಿ ಬ್ರಹ್ಮಚಾರಿ ಸಿನಿಮಾದ ಮೂಲಕ ತೆರೆಮೇಲೆ ಕಾಣಿಸಿಕೊಂಡಿದ್ದರು ಸತೀಶ್ ನೀನಾಸಂ ನಾಯಕಿಯಾಗಿ ನಟಿಸಿದ್ದರು. ಇದೀಗ ಅದಿತಿ ಬಳಿ ಜಗ್ಗೇಶ್ ಅಭಿನಯದ ತೋತಾಪುರಿ, ದಿಲ್ ಮಾರ್, ಓಲ್ಡ್ ಮಾಂಗ್ ಸೇರಿದಂತೆ ಇನ್ನೂ ಹತ್ತಕ್ಕೂ ಹೆಚ್ಚು ಸಿನಿಮಾಗಳು ಅದಿತಿ ಕೈಯಲ್ಲಿದೆ ಹೀಗೆ ಇವರ ಸಕ್ಸಸ್ ಸಿನಿಪಯಣ ಮುಂದುವರೆಯಲಿ ಎಂದು ಆಶಿಸೋಣ.